6th February 2025
ಚಡಚಣ: ಚಡಚಣ ಪಟ್ಟಣ ಸಮಗ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿದ್ದು ಮಾದರಿ ಮತಕ್ಷೇತ್ರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಪಟ್ಟಣದಲ್ಲಿ ಸುಮಾರು ೯ ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಚಡಚಣ ಭಾಗದ ಜನರ ಬಹು ದಿನದ ಬೇಡಿಕೆಯಾದ ಚಡಚಣದಿಂದ ಮಹರಾಷ್ಟçದ ಉಮದಿ (ಬಾರ್ಡರ್)ಸರಹದ್ದ ವರೆಗಿನ ರಸ್ತೆ ದುರಸ್ತಿ ಕಾರ್ಯವನ್ನು ಸುಮಾರು ರೂ ೫ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು ಮಾರ್ಚ್ ಅಂತ್ಯದವರೆಗೆ ಕಾಮಗಾರಿ ಪೂರ್ಣವಾಗುತ್ತದೆ ಎಂದರು.
ಹಾಗೂ ಸುಮಾರು ರೂ ೪ ಕೋಟಿ ವೆಚ್ಚದಲ್ಲಿ ಚಡಚಣ-ಶಿರಾಡೋಣ ರಸ್ತೆ ಸುಧಾರಣಾ ಕಾಮಗಾರಿ ಕೈಕೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ೧೬ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದ ಅವರು, ಸುಮಾರು ೧೦ ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಬಸ್ ಡಿಪೋ ಕಾಮಗಾರಿಯನ್ನು ಆರಂಭಿಸಲು ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
ರೈತರ ಕನಸಾದ ಚಡಚಣ ಏತ ನೀರಾವರಿ ಯೋಜನೆ ಆರಂಭವಾಗಿದ್ದು ಕೆಲವು ರೈತರ ಹೊಲಗಳಿಗೆ ನೀರು ಹರಿಯುತ್ತಿದೆ. ಇದು ಪ್ರಾಯೋಗಿಕ ಹಂತವಾಗಿದ್ದು ಮುಂಬರುವ ದಿನಗಳಲ್ಲಿ ವ್ಯವಸ್ಥಿತವಾಗಿ ಎಲ್ಲ ರೈತರ ಹೊಲಗಳಿಗೆ ನೀರು ಹರಿಯುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪಂಢರಪುರ-ಗಾಣಗಾಪುರ ರಾಷ್ಟ್ರೀಯ ಹೆದ್ದಾರಿ ಯೋಜನೆ ನೀತಿ ಆಯೋಗದಲ್ಲಿ ಪೆಂಡಿAಗ್ ಇದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಚಡಚಣ ಮಂಡಲ ಅಧ್ಯಕ್ಷ ಆರ್.ಡಿ.ಹಕ್ಕೆ,ಗ್ಯಾರಂಟಿಅಧ್ಯಕ್ಷ ರವಿದಾಸ ಜಾಧವ, ಪರಮಾನಂದ ಕೋಳಿ,ದೇವಪ್ಪಗೌಡ ಪಾಟೀಲ, ಸಂಗಪ್ಪ ಭಂಡರಕವಟೆ, ಸೈದು ಕೊಡಹೊನ್ನ,ಡಾ.ವಿ.ಎಸ್.ಪತ್ತಾರ, ಲೋಕೊಪಯೋಗಿ ಎಇಇ ದಯಾನಂದ ಮಠ, ಎಸ್.ಎಂ. ಪಾಟೀಲ, ಪಪಂ ಮುಖ್ಯಾಧಿಕಾರಿ ಪೂಜಾರಿ, ಸತೀಶ ಉಟಗಿ ರಫೀಕ ಮಕಾನದಾರ, ಜೆ.ಇ.ಪಾಟೀಲ, ಮಹಾದೇವ ಬನಸೋಡೆ, ದಶರಥ ಬನಸೋಡೆ ,ಸದಸ್ಯ ಪ್ರಕಾಶಗೌಡ ಪಾಟೀಲ,ಪಟ್ಟಣ ಪಂಚಾಯ್ತಿ ಸದಸ್ಯರು, ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರ,ನೂರಾರು ಕಾರ್ಯಕರ್ತರು ಹಾಜರಿದ್ದರು.